Thursday, December 20, 2012

ಪ್ರಕೃತಿಯ ಮಡಿಲಲ್ಲಿ



ನಮ್ಮದು ಕಾಡಿನಲ್ಲಿ ಮನೆ, ಅವರಿಗೆ ಕಾಡೇ ಮನೆ 

ನಾಡಿಗಿಂತ ಚಂದ ಈ ಕಾಡು,
ಎಲ್ಲಾ ಬಿಟ್ಟು ಮಾಡಲಾಸೆ ಇಲ್ಲಿ ಪುಟ್ಟದಾದ ಗೂಡು;
ಇಲ್ಲಿತ್ತು ಹಿಂದೆ ಹಿಂಡು-ಹಿಂಡು ಪ್ರಾಣಿ-ಪಕ್ಷಿ ಗಳ ಬೀಡು;
ಹಾಡಿ ಮಾನವ ಅವುಗಳಿಗೆಲ್ಲಾ 'ಚರ್ಮ ಗೀತೆ' ಯ ಹಾಡು,
 ಈಗ ನೋಡದಂತೆ ಆಗಿದೆ ಆ ವನ್ಯ ಜೀವಿಗಳ ಪಾಡು.

ನೀ ಇಲ್ಲದೆ ನಾ ಬಾಳ್ವೆನೆ ???

ಮುದ ನೀಡುವುದು ನಸುಕಿನ ಈ ನೇಸರ,
ಓಡಿಸುವುದು ಮನದಾಳದ ಎಲ್ಲಾ ಬೇಸರ .

ಯಾರ ಹಂಗೂ ಎನಗಿಲ್ಲಾ, ಸ್ವಾತಂತ್ರ್ಯ ಬಿಟ್ಟು ಬೇರೇನು ನನಗೆ ಬೇಕಿಲ್ಲಾ 

ಜಲಧಾರೆ ಯ ಸುತ್ತ ಹಾರುತಿದ್ದರೆ ಹಕ್ಕಿ,
ಅನಿಸುತಿದೆ ನೋಡಿ ಹಸಿದು ಬಂದಂತೆ ತಿನ್ನಲೆಂದು ಅಕ್ಕಿ.

ಹೆಜ್ಜೆಯ ಗುರುತು - ನೆನಪಲಿ ಬೆರೆತು 

ನಡೆಯುವ ಹಾದಿಯಲಿ ಮೂಡುವವು ಹೆಜ್ಜೆಯ ಗುರುತುಗಳು,
ಮೆಲಕು ಹಾಕಲು ಚಂದ ಸವಿಸಿದ ಹಳೆಯ... ಆ ದಿನಗಳು;
ಬೇಕೇ ಬೇಕು ಬದುಕಲ್ಲಿ ಇಂತಹ ಕಳೆದ ಒಳ್ಳೆಯ ನೆನಪುಗಳು,
ಇರುವಾಗಲೇ ಕಟ್ಟು ನೆನಪಿನ ಬುತ್ತಿಯ; ಬೀಳುವ ಮುಂಚೆ...
ಮುಖದಲ್ಲಿ ನೆರಿಗೆಗಳು. 




Note: Copy rights reserved to Hrishikesh Sagar, Banglore

Tuesday, December 18, 2012

ಬೆಂಬಿಡದ 'ಮ'


ससरिया काल Friends, Every time I write for Myself as well as for friends, but this time I just want to write for Myself. Through this post I want to get connected with each and every thing which came into my Life and want to re-collect all kinds of moments which touched me, taught me and turned me. We get very less opportunity to think on our interests or about our self so here I have got a chance to have fun with myself in a different way.

Vidya this line is for you " I was just imagining while thinking about this topic that You are sitting/standing (U know it right ? ;) why these two) in front of me and we are discussing on this topic, you are giving your comments and by looking at your comment I am digging more and more on this Subject. Really some time you are a true inspiration for many of my thoughts and articles.I Miss you and our midnight talks Bucket :P :D "




ಮದುವೆಯ ಒಂದು ತಿಂಗಳು ಮುಂಚೆ ಸೆಪ್ಟೆಂಬರ್ ೨೨, ೨೦೧೨ನಿಟ್ಟೂರು ಬಸ್ ನಲ್ಲಿ ಕೂತಾಗ ಒಂದು ಯೋಚನೆ ಬಂದಿತು. ನಾ ಇದ್ದದ್ದು 'ಮಾ'ನ್ವಿ ಲಿ ನಂತರ 'M'CA ಮಾಡಿ 'ಮಂ'ಗಳೂರಿನ 'ಮಂ'ಗಳಾದೇವಿ ದೇವಸ್ಥಾನದ ಬಳಿ 'ಮಂ'ಕಿ stand ಹತ್ತಿರ ಇದ್ದ ಅಕ್ಕನ ಮನೆಗೆ ಬಂದೆ. ನಂತರ ಕೆಲಸ ಮಾಡಲು ''ಣಿಪಾಲ ಕ್ಕೆ ಹೋದೆ. ಈಗ 'ಮ'ದುವೆ ಆಗಿ ಮೈಸೂರು ಹೋಗ್ತಾ ಇದೀನಿ. ಅರ್ರೇ ... ಎಲ್ಲಾನೂ '' ನೇ :) ನನಗೂ ಈ '' ಗೂ ಎಷ್ಟೊಂದು ನಂಟು ಇದ್ಯಲ್ಲಾ ಅನ್ನಿಸ್ತು.
     
ಆಗಲೇ ಪಟ್ಟನೆ ಕೈಯಲ್ಲಿದ್ದ Mobile ಅನ್ನು ತೆಗೆದು list ಮಾಡಲು ಶುರು ಮಾಡಿದೆ. ಅಬ್ಬಾ !!! ಇಷ್ಟೊಂದ್ ಉಂಟು ನಂಟು ಅಂತ ಆ ಪಟ್ಟಿ ನೋಡಿದಾಗಲೇ ಗೊತ್ತಾಗಿದ್ರೀ ಯಪ್ಪಾ. ಉಫ್ ನನ್ನ ಮಾತಿನ ಮೇಲೆ ನಂಬಿಕೆ ಇಲ್ಲಲಾ ??? ನೀವೇ ನೋಡಿ...

ನಾ ನನ್ನ Parents ಗೆ  ಎರಡನೇ ''ಗಳು - 'ಮು'ದ್ದಿನ ಮಗಳು. ನಾ ಹುಟ್ಟಿದ್ದು  'ಮಾ'ನ್ವಿ ಲಿ, ತುಂಬಾ ಇಷ್ಟ ಪಡೋ ಜಾಗ ನನ್ನ ''ನೆ. 'ಮಾ'ತು ಅಂದರೆ ಜೀವ. ಅದಕ್ಕೆ ಜೊತೆಯಾಗೇ  ಇರುತ್ತೆ  ನನ್ನ 'M'obile. 'ಮ'ಳೆ  ಯಲ್ಲಿ ನೆನೆಯೋದು ಅಂದರೆ ಎಲ್ಲಿಲ್ಲದ ಖುಷಿ. ಶಾಲೆಯಲ್ಲಿ Aug 15 - Jan 26 ಕ್ಕೆ ತಪ್ಪದೆ ''ಲ್ಲಿಗೆ ಮುಡಿಯೋದು ಏನೋ ಮುದ ನೀಡೋದು.''ಣ್ಣಲ್ಲಿ ಈಗಲೂ ಆಟ ಆಡಲು ಇಷ್ಟ ಪಡೋ ನಾನು 'ಮೆ'ಹೆಂದಿ ಪರಿಮಳ ದಲ್ಲಿ ಮೈ ಮರೆತು ಬಿಡೋಳು ;) Life ನ ಪ್ರತಿ ಕ್ಷಣ ''ಜಾ ಮಾಡಬೇಕು ಅನ್ಕೊಂಡು ಬದುಕೋಳು ; 'ಮಾ'ಡಬೇಕು ಅಂದರೆ 'ಮಾ'ಡಲೇ ಬೇಕು ಅನ್ನೋದು ನನ್ನ  ಸ್ವಭಾವ.

ತಲೆ ಗಿಂತ ''ನಸ್ಸಿನ ಮಾತು ಕೇಳೋ ನಾನು ತುಂಬಾ ಇಷ್ಟ ಪಡುವ ಪ್ರಾಣಿ 'ಮಂ'ಗ :). ಎಲ್ಲರೂ  ಹೇಳೋ ಹಾಗೆ ನನಗೆ ''ರೆವು ಜಾಸ್ತಿ :P ನಾ ಮರೆತೇ ಹೊಗೋ ಶಬ್ದ 'ಮೆ'ಲ್ಲ....ಗೆ -'ಮೆ'ತ್ತ...ಗೆ; ಮಾಡಬೇಕು-ಮಾತಾಡಬೇಕು ಎನ್ನೋದು :D ಇಷ್ಟ ಆಗದೆ ಕಷ್ಟ ಪಡೋ ಹಾಗೆ ಮಾಡೋದು 'ಮುಂ'ಜಾನೆ ನಿದ್ದೆ ಯಿಂದ ಏಳೋದು; ಯಾಕಂದ್ರೆ ನನಗೆ ''ಲಗೋದು ಅಂದರೆ ಧ್ಯಾನದಲ್ಲಿ ಸ್ವರ್ಗಕ್ಕೆ ಹೋದ ಹಾಗೆ ''ಹಾ ಜನಗಳೆ ;) ಆದರೂ ಇಷ್ಟ ; ನೋಡಲು-ಅನುಭವಿಸಲು ಆ ಮುಂಜಾವಿನ 'ಮಂ'ಜು.

ಊಟದಲ್ಲಿ 'ಮೊ'ಸರು ''ಜ್ಜಿಗೆ ಎಷ್ಟಿದ್ದರೂ ಸಾಲಲ್ಲಾ ಅಂತ ಜೀವ ಹೇಳಿದ್ರೆ ... ಓದೋದ್ರಲ್ಲಿ ನನ್ನ ಜೀವ ಹಿಂಡತಾ ಇದ್ದದ್ದು ''ಗ್ಗಿ. ಒಟ್ಟಿನಲ್ಲಿ  ಈ English ನಲ್ಲಿ ಹೇಳೋ  'M' aths :(  ಯಾವಾಗಲೂ ಎಮ್ಮೆ ಎಂದು ತಮಾಷೆ ಮಾಡೋಳು ; ಅದಕ್ಕೆ ಖುದ್  'M '.A  ಮಾಡಲು ಮನಸಿಲ್ಲದೇ ಇರೋ ನನ್ನ  ... ನನ್ನ ಬಗ್ಗೆ  ಸ್ವತಃ ನಾನೇ  ತುಂಬಾ ಹೆಮ್ಮೆ ಪಡೋ ಹಾಗೆ ಮಾಡಿದ್ದು ... ಇದೇ Maths ನ Life ನಲ್ಲಿ Re-Entry ಕೊಡಿಸಿ Life ನೇ ಬದಲಾಯಿಸಿದ್ದು  'M'.C.A

M.C.A ಆದಮೇಲೆ Life Transformation ಗಾಗಿ ಅಕ್ಕ,ಭಾವ,ಪಿಂಕು ಜೊತೆ 'ಮಂ'ಗಳೂರಿನ 'ಮಂ'ಗಳಾದೇವಿಯ 'ಮಂ'ಕಿ ಸ್ಟ್ಯಾಂಡ್ ನ ಹತ್ತಿರ ಮನೆ, ಅಲ್ಲಿಯೇ ಪರಿಚಯವಾದ, ಪರಿಚಯದಿಂದ ಸ್ನೇಹ, ಸ್ನೇಹದಿಂದ ಪ್ರೀತಿ ಯಾಗಿ ಉಳಿದವಳು ''ಮತಾ ಅನ್ನುವ ತರಲೆ :P ನಂತರ ಹೆಸರಿಗಷ್ಟೇ ಆದರೂ ಮೊದಲು ಕೆಲಸ ಕೊಟ್ಟ  ಊರು  ''ಣಿಪಾಲ.

ಯಾರ  'ಮು'ಲಾಜಿಗೂ ಬೀಳೋಕೆ ಇಷ್ಟ ಪಡದ ನನ್ನ  'M's ನಿಂದ 'M'rs ಮಾಡಲು ಅಕ್ಷಯ್ ಕೊಡಕಣಿ  Hero ಥರ Entry ಕೊಟ್ಟ ಮೇಲೆ  ಇಬ್ಬರ  ಸ್ವಾತಂತ್ರ್ಯ  ಹರಣ ಮಾಡಲು ''ದುವೆ :P  ಅದಕಾಗಿ ಬೇಕೇ ಬೇಕಲ್ವಾ 'ಮಂ'ಟಪ. ಅದೂ ಸಿದ್ಧವಾಗಿ ಕಾರ್ಯ ಮುಗಿದು ಅಪ್ಪ ಅಮ್ಮ ಕೈ ತೊಳೆದ ಮೇಲೆ ದಿಬ್ಬಣ ದೊಂದಿಗೆ ಹೋದ ಊರು 'ಮಿ'ರ್ಜಾನ್ ಆದರೆ ಅವರ ಅಪ್ಪ ಅಮ್ಮ ಇರೋ ಊರು  'ಮು'ಧೋಳ್.  ಎಲ್ಲಾ ಕಡೆ ತಿರುಗಿ ಕೊನೆಗೆ ಈಗ ಇರುವ ಊರು 'ಮೈ'ಸೂರು.

ಮದುವೆ ತಾನಲ್ಲದೆ ತನ್ನ ಜೊತೆ ಇನ್ನೂ ಹತ್ತು ಹಲವು 'ಮ' ತರುತ್ತೆ. ಅದರಲ್ಲಿ ಮೊದಲು ''ಕ್ಕಳು Entry ಕೊಟ್ರೆ  ಅದರಲ್ಲೂ by chance ಗಂಡಾದ್ರೆ ನಂತರ ಅಂಟಿಕೊಂಡೇ ಬರೋದು 'ಮುಂ'ಜಿ. ಅದೃಷ್ಟಕ್ಕೆ ಹೆಣ್ಣಾದ್ರೆ  ''ಗಳು - ಗಂಡಾದರೆ ''ಗ. Next Jump ಹೊಡೆದು ಮುಂದೆ ಸೇರುತ್ತೆ  'ಮೊ'ಮ್ಮಕ್ಕಳು.

ಬದುಕು ಎಷ್ಟೇ ಮುಂದು ಹೋಗಲಿ, ಇನ್ನೂ ಎಷ್ಟೇ '' ಬದುಕಲ್ಲಿ ಇರಲಿ- ಬರಲಿ. I just want to say
                                   I 'M'iss 'M'y 'M'anglore

ಈಗ '' ನ ಜಪ ಸಾಕು ; ಮುಂದಿನ Post ನಲ್ಲಿ ತ್ತೆ ರಳಿ ಬರುವೆ - ನಿಮ್ಮನ್ನೆಲ್ಲಾ  ತ್ತೆ ಸಿಗಲು. 

ಅಲ್ಲಿವರೆಗೆ ...

''ಸ್ತ್ ''ಜಾ 'ಮಾ'ಡಿ  

दसवी दानिया Guys ;)

Tuesday, December 11, 2012

ಚಿತ್ರದಿಂದ ಚಿತ್ತಕ್ಕೆ


December 10, 2012  ಅಕ್ಷಯ ನ ಸ್ನೇಹಿತ ಸಾಗರ್ ರವರು ತೆಗೆದ ಕೆಲವು photo ಗಳು. ಅದ ನೋಡಿದ ಕೂಡಲೇ ಮನಸು ಕೆಲವು ಸಾಲು ತಂದು Comment  ಮಾಡಿದರೆ; ತಲೆ ನಿಮ್ಮೊಡನೆ ಹಂಚಿಕೊಳ್ಳಲು ಹೇಳಿತು. 

ಛಲೋ ಆಗ್ಯಾದೋ ಇಲ್ಲೋ  ನಂಗ್ ಗೊತ್ತಿಲ್ರಪ್ಪ ಮನ್ಸಾಗ್ ಆ ಕ್ಷಣಕ್ ಏನ್ ಬಂತೋ - ಚಿತ್ರದಿಂದ ಚಿತ್ತಕ್ ಏನ್ ಹೊಳಿತೋ ಅದನ್ನಾ ನಾ ಇಲ್ಲಿ ನಿಮ್ಮ ಮುಂದ ಬರದೀನ್.  ಈಗ ನಾ ಹೇಳಿದ್ ಸಾಕ್ ನೀವಾ ಓದರಿ ಹೆಂಗ್ ಆದಂತ.


ಬದುಕಿಗೆ ಮತ್ತೊಂದು ಬೆಳ್ಳಿ ಕಿರಣವ ತೋರಿಸುವ ಹಾದಿಯಲ್ಲಿದ್ದರೆ ನಸುಕು,
ಪಕ್ಕದಲ್ಲೇ ಮತ್ತೆ ಬರಲು ಕಾದು ಕುಳಿತಂತಿದೆ ಕತ್ತಲೆಯ ಮುಸುಕು.

ಬೆಳಕ ಮುಚ್ಚಿಡಲು ನೋಡುತಿಹುದು  ಮೋಡ ,
ಆ ಯತ್ನದಲಿ ಸೃಷ್ಟಿ ಎಂತ ಚಂದ ಕಾಣುತಿದೆ ನೋಡ. 


ಬದುಕು ಎಷ್ಟೇ ಆಗಿರಲಿ ಸಂಕೀರ್ಣ, 
ಸಡಿಲವಾಗುವುದು  ಎಲ್ಲಾ ಬಿದ್ದೊಡನೆ  ಪ್ರೀತಿ ಎಂಬ ಹೊಂಗಿರಣ. 

ಎಷ್ಟು ಚಂದ ನೋಡಲು ದೇವರು ಕೊಟ್ಟ ಈ ನೀಲಿ, ಬಿಳಿ, ಹಸಿರು ಬಣ್ಣಗಳು,
ಸಾಲದು ನನಗೆ ತುಂಬಿಕೊಳ್ಳಲು ಎಷ್ಟಿದ್ದರೂ ಈ ಕಣ್ಣುಗಳು;
ಹೆಬ್ಬಾವಿನಂತೆ ಎಷ್ಟೇ ಚಂದವಿರಬಹುದು ಮಾನವ... ನೀ ಮಾಡಿದ ರೋಡು,
ನೋಡ ಹೋದರೆ ... ಕೇವಲ ಬರಿ ಬೋರು. 

                                        ಕಪ್ಪು ಕಪ್ಪೆಂದು ಹಳಿಯದಿರು ಬಿಳಿ ಬಣ್ಣವ ನೋಡಿ,
                            ಬಿಳಿ ಬತ್ತಿಯ ದೇವರಿಗೆ ಹಚ್ಚುವಂತೆ ಮಾಡುವುದು ಕಪ್ಪು ಮಣ್ಣಿನ ಮೋಡಿ;
                                      ಬಿಳಿ ಮೋಡವ ನೋಡಿ ಕಪ್ಪು ಮೋಡವ ತರಿಸೆಂದು ಕಾಡಿ,   
                                                ಓಡಿ ಬರುವರು ... ದೇವರಲ್ಲಿ ಬೇಡಿ.  
(ಅರ್ಥ: ಬಿಳಿಯ ಮುಂದೆ ಕಪ್ಪು ಹೀಗಳೆದರೂ ದೇವರ ದೀಪಕ್ಕೆ ಬೇಕಾಗೋ ಬತ್ತಿ ಕಪ್ಪು ಮಣ್ಣಿನಲ್ಲಿ ಹುಟ್ಟೋ ಹತ್ತಿಯಿಂದ, ಕಪ್ಪು ಮೋಡ   ಮಳೆ ನೀಡುವುದೇ ಹೊರತು ಬಿಳಿಯಲ್ಲಾ, ಅಂತ ಕಪ್ಪು ಮೋಡಕ್ಕೆ ದೇವರನ್ನು ಬೇಡುವರೇ ಹೊರತು ಬಿಳಿಗಲ್ಲಾ)  

ಬಂದು ಎತ್ತರು ಯಾರು ನೀ ಬಿದ್ದರೆ,
ತಟ್ಟುವರು ಮಾತ್ರ ಸಾವಿರಾರು ನೀ ಏನಾದರು ಮತ್ತೆ ಎದ್ದರೆ.
(ಅರ್ಥ : ನಾವು ಬಿದ್ದಾಗ ಯಾರು ನಮ್ಮನ್ನು ಎಬ್ಬಿಸಲು ಬರುವುದಿಲ್ಲಾ, ಅದೇ ನಾವು ಬಿದ್ದು ಎದ್ದು ಸಾಧಿಸಿದರೆ ಹೊಗಳಲು ಸಾವಿರಾರು ಜನ ಬರುತ್ತಾರೆ)


ವರುಷಗಳವರೆಗೆ ಇರಬಹುದು ವ್ಯಕ್ಕಿಗಳ ಹೊಳಪು,
ಕಾಲ ಗರ್ಭದಲಿ ಅದು ಹೋಗಲೇ ಬೇಕು ಒಂದು ದಿನ ಆಗಿ ಕೇವಲ ನೆನಪು. 
                       (ಅರ್ಥ : ಬದುಕಿರುವಾಗ ನಾವೆಷ್ಟೇ ನಮ್ಮ ಬಿಂಕ ತೋರಿದರೂ ಸತ್ತ ಮೇಲೆ ನಮ್ಮದೂ ಎಂದು ಉಳಿಯದು ಇಲ್ಲಿ ಏನೂ)

Nov 16,2012 Written these following lines on Bhavya and Sagar's daughter ಪರಿಣಿತಾ 

     ಪಟ ಪಟನೆ ತಿರುಗುತಿದ್ದರೆ ನಾಳೆ ,
ಇಂದಿನಲ್ಲಿ  ಮುಳುಗಿ ಹೋಗಿ ಹೊರ ಲೋಕವ ನೋಡುತಿಹಳು;
ಪುಟ್ಟ ಕಣ್ಣಲ್ಲಿ ಈ ನಮ್ಮ ಬಾಲೆ. 


ಅಮ್ಮನ ಬಣ್ಣ ಬಣ್ಣದ ಬಳೆಯ ಮೇಲೆ ಎನ್ನ ಮನಸು,
ಅದ ಹಾಕಿ ಅಪ್ಪನ ಮುಂದೆ ; ಅಮ್ಮನಿಗಿಂತ 
ತಾ ಕಡಿಮೆಯಿಲ್ಲಾ ಎಂದು ತೋರಿಸುವ ಕನಸು :)

ಕಂಡಿರಾ ಕೂತಿರುವಳಿಲ್ಲಿ ನಮ್ಮ ಮುದ್ದಾದ ಮಗು,
ಇದ್ದರೆ ಇರಬೇಕು ಇಂತ ಮುಗ್ದವಾದ ನಗು. 



After reading this post, Hope you also agree with my thoughts related to these pics and also hope that as always you all enjoyed while reading this post :D. Very soon I will come up with some other topic ಕಣ್ರೋ ...

Till Then ....


Click
Click
Click 
:P :) :D



Note: Copy rights of these photos reserved to Hrishikesh Sagar, Banglore

Tuesday, November 27, 2012

ನಾ ಮತ್ತು ಬಿಳಿ ಕಾಗೆ


ನನ್ನ ಸಾರು - ಸಾಂಬಾರು 
 

 ಈ  Princess Nov 1 ಕರ್ನಾಟಕ ರಾಜ್ಯೋತ್ಸವದ ದಿನ ಮದುವೆ ಆಗಿ ರಾಜಕುಮಾರನ ಜೊತೆ ಮೈಸೂರಿಗೆ 15 ಕ್ಕೆ ಬಂದಿಳಿದು 16 ಕ್ಕೆ ನನ್ನ ಅತ್ಯಂತ ಅಲರ್ಜಿ ದಾಯಕ ಕಾಯಕ ಅಡುಗೆ ಕೆಲಸಕ್ಕೆ ಕಾಲಿಟ್ಟು ಅನ್ನ  ಮಾಡಿ  ಹೆದರುತ್ತಲೇ  ಬೇಳೆ ಸಾರು ಮಾಡಲು ಅಣಿಯಾದೆ. ಅಂತು ಇಂತೂ ಮಾಡಿಯೂ ಆಯಿತು. ನನಗೆ ಊಟವೊಂದು ಕೆಲಸ ವಾದರೆ ಅವರಿಗೆ ಅದು ಪ್ರಾಣ ( ಅಂತಹ ಗಂಡನೇ ಸಿಗುವ  ಎಂದು MCA ಮಾಡುವಾಗ ವಿದ್ಯಾ ಎಷ್ಟೋ ಬಾರಿ ಕೀಟಲೆ  ಮಾಡಿ ಅಂತೂ ದೇವರು ಅವಳ ಆಸೆ ನೆರವೇರಿಸಿದ :P ). ಅಂತಹುದರಲ್ಲಿ ನನಗೆ ಭಯ ನಾಚಿಗೆ ; ಎಲ್ಲಿ ಅವರ ಮುಂದೆ ಹಾಗೂ ನಂತರ ಎಲ್ಲರ ಮುಂದೆ ಚಾಳಿಸಿ ಎಲ್ಲರ ಮುಂದೆ ಮರ್ಯಾದೆ ಹೋಗುವುದೊ ಎಂದು ಅದಕ್ಕಿಂತ ಹೆಚ್ಚು  ಪಾಪ ಹಸಿದು ಬಂದಾಗ ಅದರಲ್ಲೂ  ಮೊದಲ ದಿನವೇ  ಅವರಿಗೆ ನನ್ನಿಂದ ತೊಂದರೆ ಆಗುತ್ತಲ್ಲಾ ಅಂತ ಬೇಜಾರಾಯಿತು ಜೊತೆಗೆ ಚಿಂತೆ ಕೂಡ. ಪಟ್ಟನೆ ಅವರಿಗೆ phone ಮಾಡಿದೆ " ಬರುವಾಗ ಸಾರು ಅಥವಾ ಸಾಂಬಾರು ತಗೊಂಡು ಬನ್ನಿ risk ತಗೋಬೇಡಿ. ಯಾಕೋ ನಂಗೆ ಸರಿಯಾಗ್ತಿಲ್ಲಾ ಅಂತ. ಅದಕ್ಕೆ ಅವರು ಪರವಾಗಿಲ್ಲಾ ನನಗೆ ನಡಿಯುತ್ತೆ ಅಂದರು. ಅವರು ಬಂದು ತಿಂದು ನೋಡುವ ತನಕ ನನಗೆ ಚಡಪಡಿಕೆ.

ಅಂತೂ  ಅಕ್ಷಯ್ ಬಂದರು, ಪ್ಲೇಟ್ ನಲ್ಲಿ ಸಾರು ಹಾಕಿದ  ಕೂಡಲೇ "ಆಹ್, ಒಳ್ಳೆ  ಪರಿಮಳ  ಬರ್ತಿದೆ " ಅಂದರು, ನಾ ಮತ್ತಿಷ್ಟು nervous. ಮನಸಲ್ಲೇ ಓ  ದೇವ್ರೇ ಎಂದೆ ಉಸಿರು ಬಿಗಿ ಹಿಡಿದು. ಕಡೆಗೆ  ಮುಧೋಳ್  ನ ಜೋಳದ ರೊಟ್ಟಿ ಜೊತೆಗೆ ತಿಂದು ಹೇಳಿದ್ರು ಚೆನ್ನಾಗೇ ಆಗಿದ್ಯಲ್ಲಾ  ಅಂತ. ನಾ doubt ನಲ್ಲಿ ಅವರ ಕಡೆ ನೋಡಿದೆ. ಅವರು ಹೇಳಿದ್ರು ನಿನ್ನ ಸಮಾಧಾನಕ್ಕೆ ನಾ ಹೇಳ್ತಿಲ್ಲಾ  ಊಟದ ವಿಷಯದಲ್ಲಿ ನಾ ಸುಳ್ಳು ಹೇಳೊದಿಲ್ಲಾ ನಿಜವಾಗಲು ಚೆನ್ನಾಗಾಗಿದೆ ಅಂತ, ಆಗ ನಿಜ ಮಾಡಿದಕ್ಕೂ   ಸಾರ್ಥಕ ಅನ್ನಿಸ್ತು. ರಾತ್ರಿಗೆ ಹೆದರಿ ಹೆದರಿ ಮಜ್ಜಿಗೆ ಹುಳಿ ಮಾಡಿ taste ನೋಡಲು ಹೇಳಿದೆ.

ಅವರು " ಚೆನ್ನಾಗೆ ಮಾಡ್ತಿಯಲ್ಲ ಅಡಿಗೆ !!! ಉಪ್ಪು ಖಾರ ಎಲ್ಲಾ ಸರಿ ಇದೆ, ಬೇಕಂತ ಹೇಳ್ತಿಯೋ ಹೇಗೆ ಎಲ್ಲಿ ಅಡಿಗೆಲಿ ಅದು ಇದು ಅಂತ ಜಾಸ್ತಿ ಮಾಡಕ್ ಹಚ್ತಾರೆ ಅಂತ ಹಾ ಹೌದು ಅಂದರು ". ಊಟ ಆದ ನಂತರ ನನ್ನ ಮಾವನಿಗೆ phone ಮಾಡಿ ಅಡಿಗೆ ಚೆನ್ನಾಗಿ ಮಾಡ್ತಾಳೆ ಅಂತ ಹೇಳಿದ್ರು , ಆಮೇಲೆ ನನ್ನ ಕೈ ಗೆ ಫೋನ್ ಕೊಟ್ಟಾಗ ಮಾವ ಹೇಳಿದ್ರು "ಹೆಂಡತಿ ಏನು  ಮಾಡಿದ್ರು ತಿನ್ನಲೇ ಬೇಕು, ನನ್ನ ಮುಂದೆ ಅಡಿಗೆ ಚೆನ್ನಾಗಿ ಆಗಿಲ್ಲಾ  ಅಂದ್ರು ಚೆನ್ನಾಗಾಗಿದೆ ಅಂತಾನೆ ಹೇಳ್ತಾನೆ " ಅಂತ ಹೇಳಿ ನಗಾಡಿದ್ರು. ಅದಾದ ಮೇಲೆ ನನ್ನ ಅಪ್ಪನಿಗೆ ಫೋನ್  ಹೋಯಿತು " ಇವತ್ತು ಪ್ರೀತು first class ಬೇಳೆ ಸಾರು ಮಜ್ಜಿಗೆ ಹುಳಿ ಮಾಡಿದ್ಲು" ಅಂತ ನನ್ನ ಕಟ್ಟಿಕೊಂಡ ಗಂಡ ಜೋಷ್ ನಲ್ಲಿ ನನ್ನ ಜನ್ಮ ದಾತನಿಗೆ ಹೇಳಿದ್ರೆ ಅವರು ಒಂದು ನಿಮಿಷ silent ಆಗಿ ಆಮೇಲೆ ಹೌದಾ ಅಂದರು, ಮತ್ತೆ ಅಕ್ಷಯ್ ಸುಳ್ಳು ಹೇಳ್ತಿಲ್ಲಾ ನಿಜವಾಗಲೂ ಚೆನ್ನಾಗಿ ಆಗಿತ್ತ್ ಅಂತ ನಂಬಿಸಲು ಹೋದರು. ಎಷ್ಟು ನಂಬಿದರೋ  ಬಿಟ್ಟರೋ ಗೊತ್ತಿಲ್ಲಾ ರೀ. ಒಟ್ಟಿನಲ್ಲಿ ಬೇಕಿತ್ತಾ ಹೇಳೋದು ಅನ್ನಿಸ್ತು .

ಇದಾದ ಮರುದಿನ ಅಮ್ಮ  ( ನನ್ನ ಅಜ್ಜಿ ) ನನ್ನು  ಕೇಳಿ ಉಪ್ಪಿಟ್ಟು ಮಾಡಿದೆ, I won't say it was superb ; But it was ok and ಯಾರಾದ್ರೂ ತಿನ್ನೋ ಹಾಗಿತ್ತು. ಅಕ್ಕನಿಗೆ ಫೋನ್ ಮಾಡಿ ಅಜ್ಜಿ ಹೇಳಿದರಂತೆ ಪ್ರೀತು ಫೋನ್ ಮಾಡಿದ್ಲಾ ಉಪ್ಪಿಟ್ಟು ಮಾಡಿದ್ಲಾ ಹೇಗಾಯ್ತಂತೆ ಅಂತ, ಅದಕ್ಕೆ ಅಕ್ಕಾ ಅಮ್ಮ ನಿಗೆ ಫೋನ್ ಮಾಡು ಅಂದಳು. ಮಾಡಿದೆ. ಹೇಗಾಯ್ತು ಕೇಳಿದ್ರು. ಪರ್ಫೆಕ್ಟ್ ಆಗಲು ಏನ್ Miss ಆಯ್ತೋ ಅದನ್ನ ಹೇಳಿದೆ ಬೇಜಾರಿನಲ್ಲಿ. ಹಿಂದಿನಿಂದ ಅಕ್ಷಯ್ "ಏಯ್, ಚೆನ್ನಾಗೆ ಆಗಿದೆ" ಅಂತ
ಹೇಳಿದ್ರು. ಅಮ್ಮಾ ಏನಾಯ್ತ್ ಕೇಳಿದಾಗ ಏನಿಲ್ಲಾ ಚೆನ್ನಾಗೇ ಇದೆ ಅಂತ ಹೇಳ್ತಿದಾರೆ ಅಂತ ಹೇಳಿದೆ. ಜೋರಾಗಿ ನಗಾಡಿ ಇಲ್ಲಾ ಸುಳ್ಳು ಹೇಳ್ತಿದಾನೆ ಅಂದರು :P :( 

ಅಲ್ಲಾ ಸ್ವಾಮಿ , ಸುಮಾರು ೧೦ ವರ್ಷದ ಹಿಂದೆ ನಾ ಮೈಸೂರ್ ಟ್ರಿಪ್ ಗೆ ಬಂದು ಹೋದಮೇಲೆ ನನ್ನ ಮಾಮ ಮೈಸೂರ್ Zoo ಬಿಳಿ ಕಾಗೆ ನೋಡಿದ್ಯಾ ಕೇಳಿದಾಗ ಇಲ್ಲಾ ಇರಲಿಲ್ಲಾ ಅಂದೆ. ಹಿಂದೆ ಇತ್ತಂತೆ ಅಂದಾಗ ನಂಬಿದೆ. ಆ ನಂತರ ನನ್ನ ಮನೆಯವರಿಗೆಲ್ಲಾ ಹೇಳಿ ಕೇಳಿದಾಗ ಹೌದಾ, ಇರಬಹುದೇನೋ ಅಂತ ಹೇಳಿ ನಂಬಲಿಕ್ಕೆ Ready ಆದರು. ಈಗ ಇಷ್ಟು ವರ್ಷದ ನಂತರ ಅವರ ಮಗಳು ಅದೇ ಮೈಸೂರ್ ಗೆ ಹೋಗಿ ಸೇರಿದಾಳೆ. ಅಳಿಯ ಮಗಳು ಚೆನ್ನಾಗಿ ಅಡುಗೆ ಮಾಡ್ತಾಳೆ ಅಂದರೆ ಬಿಳಿ ಕಾಗೆ ಕಥೆ ಥರ ಸುಮ್ಮನೆ ನಂಬಬಹುದಲ್ವಾ :P

ಅಲ್ಲಾರಿ, ಅಪ್ಪ ಅಮ್ಮಂಗೆಲ್ಲಾ ತಲೆ ಚಿಟ್  ಹಿಡಿದು ಕೆರ ಹಿಡ್ಕೋಳೊ ಹಾಗಿರೋ ಶಾಲೆ Books, Course ನೋಡಿದರೂ ಮಕ್ಕಳು ಚೆನ್ನಾಗಿ ಮಾರ್ಕ್ಸ್ ತೆಗಿಬೇಕು ತೆಗಿತಾರೆ ಅನ್ನೋ ನಂಬಿಕೆ ಇಟ್ಕೊಂಡು ಓಡಿಸ್ತಾರೆ. ನಂಬಿಕೆ ಇಂದ ಕವಿ ಅಲ್ಲದ ನನ್ನ ಸಾಹಿತ್ಯ ಸಮ್ಮೇಳನಕ್ಕೆ ಕಳಿಸಿ ಸ್ಫೂರ್ತಿ ಕೊಟ್ಟರು , BA ಮಾಡಿದ ನಾನು MCA ಮಾಡುವಾಗ ನಂಬಿಕೆ ಕಳೆದು ಕೊಂಡಾಗ ಎಲ್ಲರಿಗೂ ನಾ ಮಾಡ್ತಿನಿ ಅನ್ನೋ ನಂಬಿಕೆ ಇತ್ತು.

ಆದ್ರೆ... ಮಾತ್  ಎತ್ತಿದರೆ  ತಲೆ ಬಾಚ್ಕಳಿ, powder ಹಾಕೋಳಿ  ಅನ್ನೋ ಹಾಗೆ  ಸದಾ Gas ಹಚ್ಚಿ ಬೇಳೆ ಬೇಯಿಸಿ ಸಾಂಬಾರು ಪುಡಿ, ಖಾರ ಪುಡಿ, ಉಪ್ಪು, ಒಗ್ಗರೆ  ಹಾಕಿ ಅಂತ ಹೇಳೋ ಮಾಡೋ ಸಾರನ್ನ ಮಾಡಿದೆ ಅಂದರೆ ಎಂತ ಹೇಳೋದು ಮಾರಾಯ್ರೆ ... ಅಡುಗೆ ಅನ್ನೋದು ನಾವ್ ಬರಿಯೋ  Theory, Practical, Viva Exam ತಗೊಳ್ಳೋ ಡಬ್ಬಾ Marks ಗಿಂತ ಕಷ್ಟಾನಾ :O

ಬಿಳಿ ಕಾಗೆ ಇದೆ ಎಂದು  ಹೇಳಿದರಾದರೂ ನಂಬು ಆದರೆ ಪ್ರೀತು ಅಡಿಗೆ ಚೆನ್ನಾಗಿ ಮಾಡಿದಳೆಂದರೆ ಅಲ್ಲಾ ಅನ್ನೋ ಹೊಸ ಗಾದೆ ಹುಟ್ಟಿದಂತಾಗಿದೆ ನನ್ನ  ಪಾಲಿಗೆ , ಮಂಡೆ ಸಮ ಇಜ್ಜಿ  ಮಾರಾಯ್ರೆ , ಸಮ  ಇಜ್ಜಿ  :( Oh , No. ಈಗ ತಾನೇ ಬಂದ ಬಿಸಿ ಬಿಸಿ ಸುದ್ದಿ. ಅಕ್ಷಯ್ ನಿಂದ ನನ್ನ ಅಕ್ಕನಿಗೆ Phone; ನನ್ನ ಅಡುಗೆಯ ಹೊಗಳಿಕೆ-ಸ್ವಲ್ಪ ವಿರಾಮ-ಅಕ್ಕನಿಂದ ಅಕ್ಷಯನಿಗೆ ಸಾಂತ್ವನ :(

ಕಥೆ ಮುಂದುವರಿಯುವುದು ...

ಅಲ್ಲಿವರೆಗೆ ಯಾನ್ ಬರ್ಪೆ :)


Thursday, April 26, 2012

ಅರ್ಪಣೆ

ನನಗಿಂತಲೂ ಸುಂದರವೇ ನಿಮ್ಮ ಆ ದುಡ್ಡು ಮತ್ತು ಕಟ್ಟಡ ???


 ಕಂಡ ಕಂಡಲ್ಲಿ ಸಸ್ಯ ರಾಶಿಯ ಕಡಿವರು,
ಸಿಕ್ಕ ಸಿಕ್ಕಲ್ಲಿ ಮೂರ್ತಿಗಳ ಇಡುವರು ; 
ಗಿಡ ಮರವ ನೆಡುವ ಮನಸೊಂದು ಇವರು ಮಾಡರು,
ಅಂಧರಂತೆ ಕಡಿಯುತ್ತ  ಹೆಜ್ಜೆಯ ಇಡುತಿಹರು.

ತಿಳಿಯಲೊಲ್ಲರು  ಈ ಹಸಿರಲ್ಲೇ  ಅಡಗಿದೆ ನಿಜವಾದ ಸ್ವತ್ತು,
ಇದರ ಪರಿವಿಲ್ಲದೆ ತರುತಿಹರಲ್ಲಾ ಅದಕೆ ಕುತ್ತು, 
ಇಳಿಸ ಬೇಕಾಗಿದೆ ಈ ಜನರ ದುಡ್ಡು ಮಾಡುವ ಮತ್ತು -
ಗಿಡದ ಮೇಲೆ ಕಟ್ಟಡ ಕಟ್ಟುವ ಕಸರತ್ತು;
ಇಲ್ಲದಿರೆ ಇವರಿಗೆ ಬುಧ್ಧಿ ಬರುವ ಹೊತ್ತು,
ಹಿಚುಕಿ ಹೋಗುವುದುಂಟು ಎಷ್ಟೋ ಪೀಳಿಗೆಯ 
ಸುಂದರ ಬದುಕಿನ ಕತ್ತು. 
ಅರ್ಪಣೆ : 
ಸಿಂಧನೂರು ಹಾಗೂ ರಾಯಚೂರು ಹೋಗುವ ರಸ್ತೆಯ ಬದಿಯಲ್ಲಿ ನವಾಬನ ಕಾಲದಿಂದಲೂ ರಾರಾಜಿಸುತ್ತಿದ್ದ ... ಬಾಲ್ಯದಲ್ಲಿ ನನ್ನೊಡನೆ ಆಡಿ, ಮನಸಿಗೆ ಮುದ , ಆಡಲು ಮರದ ಅಂಟು, ತಿನ್ನಲು ಜೇನು, ಸುಸ್ತಾದಾಗ ನೆರಳನ್ನು ನೀಡಿ ಕೊನೆಗೆ  ಮನುಷ್ಯನ ಮೂಢತನಕ್ಕೆ  ಸಾಮೂಹಿಕವಾಗಿ ಬಲಿಯಾದ ನನ್ನ ಆ ಬಾಲ್ಯ ಸ್ನೇಹಿತರನ್ನು ನೆನೆಯುತ್ತ ಈ ಕವಿತೆಯ ಸಾಲುಗಳನ್ನು ಆ ಎಲ್ಲಾ ಸಾಲು ಮರಗಳಿಗೆ ಅರ್ಪಿಸುತ್ತಿದ್ದೇನೆ.




Wednesday, April 25, 2012

My ಚಟ್ನಿ ಪ್ರಸಂಗ



ಊಟದ ವಿಷಯ ಎಲ್ಲೋ ಅಲ್ಲಿ ನನ್ನ ವಿಷಯ ಬಂದ್ರೆ ಎಲ್ಲರಿಗೂ ನೆನಪಾಗೋದು ಒಂದೇ ಒಂದು. ಅದೇನೆಂದರೆ ಚಟ್ನಿ,ಚಟ್ನಿ and ಚಟ್ನಿ :) ಅದನ್ನ ನೋಡಿದಾಗಲೆಲ್ಲಾ  ಆ ನನ್ನ ಚಿನ್ನದಂತ ಚಟ್ನಿಗೂ  ನನಗೂ ಎಲ್ಲಿಲ್ಲದ ಜನ್ಮ ಜನ್ಮಾಂತರದ ಸಂಭಂದವಿರುವಂತೆ ಹೃದಯ ಮಿಡಿಯುತ್ತೆ ಕಣ್ರೀ ;)

ಹಾಸ್ಟೆಲ್ ನಲ್ಲಿ ಸಂಜೆ ಯ ಚಟ್ನಿ ರಾತ್ರಿ ಯ ಪುಳಿಯೊಗರೆ ವ್ಹಾ!! ವ್ಹಾ !! ಕೇಳ್ರಿ ಯಾರಾದ್ರೂ ತಿನ್ದೊರಿಗೆ :) ಈಗಲೂ ನೆನ್ಸಿದ್ರೆ ಬಾಯಲ್ಲಿ ನೀರು ಬರುತ್ತೆ. ಉಮ್ಮಾ . ಪ್ರೀತಿ ಮಾಡೋರಿಗೆ... ಪ್ರೀತಿ ಕುರುಡು ಅಂತ ಹೇಳ್ತಾರಲ್ವಾ ನನ್ನ ವಿಷಯದಲ್ಲೂ ಹಾಗೆ ಆಯ್ತು :( ಹೇಳ್ತೀನಿ ಕೇಳಿ ಹಾಸ್ಟೆಲ್ ನಲ್ಲಿ ನಡೆದ ನನ್ನ ಆ ಚಟ್ನಿಯ ಪ್ರಸಂಗ ...

ಆಗ ಬೇಸಿಗೆ ಸಮಯ ಕುಚಲಕ್ಕಿ ಗಂಜಿ  ಜೊತೆ ನೆಂಚಿ ಕೊಳ್ಳಲು ಚಟ್ನಿ ಮಾಡೋರು, Engineering students ಗಳಿಗೆ ರಜೆ ಹಾಗೂ ಚಟ್ನಿ ತುಂಬಾ ಮಾಡಿದ್ರಿಂದ ಅಪರೂಪಕ್ಕೆ ಎಂಬುವಂತೆ ನಮಗೆ ಹಾಕಿಕೊಳ್ಳಲು ಬೇರೆ ಪದಾರ್ಥ ಗಳೊಡನೆ ಅದನ್ನು ಕೂಡ ಇಟ್ಟಿದ್ರು. ಅದನ್ನು ಕಂಡದ್ದೇ ನನ್ನ ಕಣ್ಣಲ್ಲಿ ಇರೋ ಬರೋ ನಕ್ಷತ್ರ ಗಳೆಲ್ಲಾ ಮಿಂಚತೊಡಗಿತು, ಎದೆ ಲಬ್ ಡಬ್ - ಲಬ್ ಡಬ್ ಎಂದು ಹೊಡೆಯತೊಡಗಿತು, ಖುಷಿಗೆ ಕೈ ಕಾಲು ನಡುಗತೊಡಗಿತು... ಇನ್ನೂ ಹೇಳಿದ್ರೆ ಸ್ವಲ್ಪ ಜಾಸ್ತಿ ಆಗುತ್ತೆ ಇಷ್ಟೇ ಸಾಕ್ :) ಆದ್ರೆ ನಿಜ ಹೇಳಕತಿನಿ ನಾ ಏನ್ ಹೇಳಿನೋ ಅದೆಲ್ಲಾ ಖರೆ ಆದ !!! ನೋಡಿಕಂಡ್ರಪ್ಪಾ.. ನಂಬಾರ ನಂಬಿ ಬಿಡ್ರಾರ ಬಿಡ್ರಿ ;)

ಅಂತೂ ನನ್ನ ಪಾಳಿ ಬಂತು. ಚಟ್ನಿ ಹಾಕ್ಕೊಳಕ್ಕ ಅಲ್ಲಿ table spoon ಇಟ್ಟಿದ್ರು. ಖುಷಿಲಿ ಒಂದು ಸಲ full ಚಮಚ ಹಾಕೊಂಡೆ, ಛೆ ಇದೆಲ್ಲಿ ಸಾಲುತ್ತೆ ಅಂತ ಮತ್ತೆ ವಾಟಿಲಿ (ಬಟ್ಟಲು) ಕೈ ಹಾಕಿ ಮತ್ತೊಮ್ಮೆ full ಚಮಚದಲ್ಲಿ ಹಾಕ್ಕೊಂಡೆ. ಹಾಕಿ ತಿರಗಿ ತಟ್ಟೆ ನೋಡಿದ್ದೇ ತಡ ಹೊಸದಾಗಿ ಮದುವೆಯಾದ ಮದುವಣಗಿತ್ತಿ ಥರ ನಾಚಿಕೆ ಆಯ್ತರಿ :( ಯಾಕ ??? ಹಾಕ್ವಾಗ ಧಾತ್ ಆಗ್ಲಿಲ್ಲಾ ಹಾಕ್ಕೊಂಡ್ ಆದ್ಮೇಲೆ ನೋಡ್ತೀನಿ ಇಡೀ ತಟ್ಟೇಲಿ ನನ್ನ ಪ್ರಿಯತಮ ಚಟ್ನಿ ಒಳ್ಳೆ ಗುಡ್ಡದ ಹಾಗೆ ಎದ್ದು ಕಾಣತಿದ್ದ :D ಅಯ್ಯೋ  ನನ್ನ  ಅವಸ್ಥೆ.

ಏನು ಮಾಡೋದು ಅಂತ ತಿಳಿಲಿಲ್ಲಾ, ಹೇಗಾದ್ರೂ ಮಾಡಿ ಎಲ್ಲರ ಕಣ್ಣಿಂದ ನನ್ನ ಚಟ್ನಿ ಯನ್ನು ಕಾಪಾಡಬೇಕಿತ್ತು, ಆಗ ಥಟ್ ಅಂತ idearia ಬಂತು ಕಣ್ರೀ :D ಏನ್ ಗೊತ್ತಾ!!! ಕಣ್ಣು ಮುಚ್ಚಾಲೆ ಆಡ್ವಾಗ ಅಡಗಲಿಕ್ಕೆ ನಾವ್ ಏನ್ ಮಾಡ್ತಿವಿ ಹೇಳಿ ? ಚಾದರ್, ಚಾಪೆ ಯಲ್ಲಿ ಅಡಗಿ ಕೂಡ್ತಿವಲ್ವಾ :) ಹಾಗೆ ನನ್ನ ಚಟ್ನಿ ನಾ ಬಿಳಿ ಅನ್ನದ ಒಳಗೆ ಹಾಕಿ ಮುಚ್ದೆ. ಆಮೇಲೆ ಊಟಕ್ ಕುಳಿತೆ. ಮಾತಾಡ್ತಾ ಮಾತಾಡ್ತಾ ಕ್ಷಣಕ್ಕೆ ಚಟ್ನಿ ಮರೆತು ಹೋಯ್ತ್ ಆಮೇಲೆ ಎಲ್ಲಿ ಇಟ್ಟಿನಿ ಅನ್ನದ್ ಅಂತೂ ಮರ್ತೆ ಹೋಯ್ತ್ :( ಊಟ ಮಾಡ್ತಾ ಮಾಡ್ತಾ ಬೊಬ್ಬೆ ಇಟ್ಟಾಗಲೇ ಗೊತ್ತಾಗಿದ್ದು ನಾ ಬಚ್ಚಿಟ್ಟ ಜಾಗ.

 ಅನ್ನ ಸರಿಸಿ ನೋಡ್ತೀನಿ ಅರ್ಧದಷ್ಟು ಖಾರ ಚಟ್ನಿ ಬಾಯಲ್ಲಿ, ಈಗ ಹಾಗೆ ತೆಗ್ಡಿಟ್ರೆ ಎಲ್ಲರ್ಗೂ ಕಾಣ್ತದೆ ನಗ್ತಾರೆ ಅಂತ ಪುನಃ ಬೇಗ ಬೇಗ ಅನ್ನದಲ್ಲಿ ಮುಚ್ಚಿ ಸ್ವಲ್ಪ ಮಾತ್ರ ಉಳಿಸುವ ಅಂತ ಬೇಗ ಬೇಗ ಖಾಲಿ ಮಾಡತೊಡಗಿದೆ... ಉಫ್ಫ್ ... ಬೇಕಿತ್ತಾ ನನಗೆ ಈ ಅವಸ್ಥೆ :(  ನನ್ನ ಚಟ್ನಿ ನ ತಿಂದು enjoy ಮಾಡೋದು ಒಂದು ಕಡೆ ಇರಲಿ, ಗಬ ಗಬ ತಿಂದು ಎಲ್ಲರ್ಗೂ ಕಾಣೋ ಹಾಗೆ ಸ್ವಲ್ಪ ಉಳಿಸೋ ಲೆಕ್ಕದಲ್ಲಿ ಖಾರ ನನ್ನ ನಾಲಗೆನ ಗರಗಸ ದಲ್ಲಿ ಗರ ಗರ ಅಂತ ಕೊಯ್ದ್ ಇಟ್ಟಂಗ್ ಆಗಿ ಜೀವ ೨ ಆಗಿತ್ರೀ :( ( Sound & Picture ನಿಮ್ಮ imagination ಗೆ ಬಿಟ್ಟಿದ್ದು )  

ಆಸೆಯೇ ದುಃಖಕ್ಕೆ ಮೂಲ ಅಂತ ಕೇಳಿದ್ದೆ ನಿಜ ಆದರೆ ನನ್ನ ಚಟ್ನಿ ನನಗೆ ಈ ಪಾಠ ಕಲಿಸುತ್ತೆ ಅಂತ ಯಾವತ್ತು ಅಂದುಕೊಳ್ಳಿಲ್ಲಾ ಕಣ್ರೀ ಅಂದು ಕೊಳ್ಳಿಲ್ಲಾ... ಪ್ರೀತಿ ಕಲಿಸಿ ಕೊಟ್ಟ ಪಾಠ ಕಲಿತೆ ಆದ್ರೆ ಆ ಪ್ರೀತಿ ನ ಮರಿಲಿಲ್ಲಾ, ಕಡಿಮೆಯಾಗಲಿಲ್ಲಾ .. ಅದು ಇನ್ನೂ ಯುಗ ಯುಗಗಳ ವರೆಗೆ ನಮ್ಮ ಪ್ರೀತಿ ಗಾಥೆಯನ್ನು ಹೇಳುವಷ್ಟು ನನ್ನ ಅಂತರಾಳದಲ್ಲಿ ಬೇರೂರಿ ಅಮರವಾಗಿ ಹೋಗಿದೆ ರೀ ...

ನನ್ನ ಪ್ರೀತಿಯ ಓದುಗರೇ ಒಂದು ಮಾತು ಹೇಳಲಾ? ಇಂದಿನ ಈ ಚಟ್ನಿ ಪ್ರಸಂಗ ನಿಮಗಲ್ಲಾ ನನ್ನ ಪಾಲಿಗೆ ಬಂದು; ಹೊಟ್ಟೆಗೆ ಹೋದ - ಹೋಗಲಿರುವ  ಚಟ್ನಿಗೆ ಅರ್ಪಿಸ್ತಾ ಇದ್ದೇನೆ, ದಯವಿಟ್ಟು ಯಾರು ಬೇಜಾರು ಮಾಡಿಕೊಳ್ಳ ಬಾರದು ನಿಮಗೆಲ್ಲರಿಗೂ ನನ್ನ ಚಟ್ನಿಯ ಮೇಲಾಣೆ.
 
ಹಾಗಾದ್ರೆ ನಾ ಬರ್ಲಾ...

ಇಂತಿ ನಿಮ್ಮವಳೇ ಆದ ,
 ಚಟ್ನಿ ಅಭಿಮಾನಿ :)




Wednesday, April 11, 2012

Hold your Breath



Few times, whenever I saw the Skype status of my Boss Mr. Mathew Abraham felt to open the link which he has put in his status. Every time my mind would be busy with some stuff and don't wanted to read it in hurry burry just for a sake of reading.

Finally One fine day (Apr 4) I was free, saw that link, got a mood to read it, I clicked on this link:"My 3 Stories" and I started to read... Due to audio problem I was unable to watch the video but for you, if possible watch n read the whole story.

Trust me just to read and digest I took 2 days and analyzing word to word. I realized why my Boss has so much respect about Jobs and about his Company. Before that I would think may be he is successful that's why he thinks as his ideal. But NO, It's only because He was a Man of Value. Money, Popularity, Success .. comes and goes.. But the One which remains is Value. How much value you put for your life... will tell how many people have awe about you. This is the same quality which I saw in my Mother also.

15 years back my Mother passed away, when I was young people would praise her but I didn't gave much attention to it like other children will give, but as I grown up and learnt the secrete of Art of Living then I realized why my Mother is still alive in many people's life and now after reading this blog I just remembered those things...
 
While reading I was holding my breath, I forgot this world and was feeling like Jobs is alive and  I am sitting infront of him to listen and to learn many more things about life...

Today I am inspired and impressed with their words, thoughts and action. After all these things now I am feeling to share it with you to spread his words, thoughts etc... So Now it's your turn the ball is in your court.. Stay Hungry Stay Foolish and then Read and Watch it. If you like/dislike do comment on it :)

 Till then,

Stay Hungry.. Stay Foolish :) 

Saturday, March 31, 2012

Open Your Eyes :)


Let's smile like these Kids  :D

I am in Peace :) Did I Buy from This ..
B4 our LIFE may End like this, Let's make it More Meaningful

What can you LEARN from this Pic ??
Light is Everywhere, U just have to open the Curtain

Can we Sleep like these people ??

Will the Next Generation will get this Environment ??

Let's Our -ve Thoughts n Emotions Sleep Like this SNAKE

It's U only U, The Best Companion for Ur Whole LIFE
Places:

1. My Home at Nittur, Udupi
2. My old PG , When I got my first Salary at Omnion :)
3. My old office at Ananth Nagar, Manipal
4. Way to My Old PG, Bannanje
5.  My Old office at Kadiyali
6,7,9. Near to my New office, Bannanje
8. Near MGM college, Udupi

Monday, March 26, 2012

Wake Up & Shake Up


Please Share it , Don't Waste it :(
Today morning while going to office I looked at so called Dust bin which is not there in actual. Plenty of chickoos were laying down beside the road,  it gave a sense of pinch in my heart.

At one side people are saying prices are reaching sky, salary is not sufficient and not able to fullfill their basic needs.. after seeing this one question arised in my mind. Hiking in price is it there in the real scenario or are we creating this situation by our selfish and foolish behaviour.


In Market or at Home if any beggar come at home we don't prefer to give which is good, we feel to give spoiled food or some chillare Right !!!

We will keep everything with us ( not because we know the importance of those things just because of our gree and selfish nature ) until we realize now it no of use and then finally with a big heart we will through them in a dust bin. Some people even at that moment don't get the mind set to give, more than Human and Animal they give Prefer and give priority to Dustbin what a Pity :(

In Japan during World War II when they were almost finish due to Atom Bomb no one expected that within few years again this Japan will Shine and will Fly like a phoenix bird. It didn't happen by a miracle due to their Thoughts, They knew the importance of Sharing and Today you can see the result.

Now still we have time friends, Just Wake Up and Shake Up and have a mind set to share things before it is too late ... How much we give more than that we will gain that is for sure, because God is a pakka 'Business Man'  he always return with interest what he takes from us, just give a thought on it..

Let's build a Healthy, Wealthy, Peaceful Sharing Caring Society as a gift for the next Generation :)

Place where the photo has taken :
Near my old PG, Bannaje, Udupi