Thursday, June 30, 2011

ಹೊರತಳ್ಳದಿರಿ





ಏಕಾಂತದಲ್ಲಿ ಮೆತ್ತನೆಯ ಹಾಸಿಗೆಯ ಮೇಲೆ ಮಲಗಿ ದಿಂಬಿಗೊರಗಿ ತುಸು ನಾಚುತ್ತಾ, ಕಂಗಳಲ್ಲಿ ಮುಂದಿನ ಬದುಕಿನ ಸವಿಗನಸನ್ನು ಕಾಣುತ್ತ ಕುಳಿತಿದ್ದ  ಹುಡುಗಿಗೆ  ಒಂದೆಡೆಗೆ ಮನಸು ಬೇಡವೆಂದರೆ ಇನ್ನೊಂದೆಡೆ ಬೇಕು ಅನಿಸುತ್ತಿತ್ತು. ಮನೆಯಲ್ಲಿ ಮದುವೆಯ ವಿಷಯ ತೆಗೆದಾಗ  ಸಹಜವಾಗಿಯೇ ಅವಳಲ್ಲಿ ಆ ಕನಸು, ಆತಂಕ, ನಾಚಿಕೆ ಎಲ್ಲವೂ ಮೂಡಿತು. ಗಂಡಿನ ಕಡೇಯವರು ಬಂದಾಯಿತು ಮಾತು ಕತೆ ಶುರುವಾಯಿತು , ಅಲ್ಲಿಗೆ ಕೊನೆಯಾಗದೆ ನೋಡಿದ ಗಂಡುಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಹುಡುಗಿಯ ವಯಸ್ಸು ಇನ್ನೂ ಚಿಕ್ಕದಾದರೂ , ವಿದ್ಯೆ , ಬುದ್ಧಿ , ಸೌಂದರ್ಯ ಇದ್ದರೂ ತಂದೆ ತಾಯಿಗಳಿಗೆ ಅವಳ ಮದುವೆಯೇ  ದೊಡ್ಡ ಚಿಂತೆಯಾಯಿತು.

ಮೇಲಿನ ಘಟನೆ ಕೇವಲ ಒಂದು ನಿದರ್ಶನ ಅಷ್ಟೇ, ಎಲ್ಲರ ಮನೆಯ ದೋಸೆಯೂ ತೂತೆ ಎನ್ನುವಂತೆ ಇದು ಮನೆ ಮನೆಯ ಕಥೆ, ಈಗ  ಒಮ್ಮೆ ಕನಸ ಕಟ್ಟಿದ ಹುಡುಗಿ ದೃಷ್ಟಿಯಿಂದ ನೋಡಿ. ಮದುವೆ ಬದುಕಿಗೆ ಮುಖ್ಯ ಹಾಗೂ ಅವಶ್ಯಕ ನಿಜ, ಜವಾಬ್ದಾರಿಯಿಂದ  ಪಾಲಕರು ಚಿಂತಿಸುವುದು ಸರಿಯೇ, ಹೌದು. ಆದರೆ ಮದುವೆ ಎನ್ನುವುದು ಅವರು ಜೀವನದಲ್ಲಿ ಸುಖವಾಗಿ ಇರಲಿ ತಮ್ಮ ಜೀವನ ಸಂಗಾತಿ ಜೊತೆ ಎನ್ನುವ ಉದ್ದೇಶದಿಂದ ಹುಡುಕುವ ಬದಲು, ಮಗಳು  ಒಂದು ಜವಾಬ್ದಾರಿ ಅವಳ ಮದುವೆ ಒಂದು ಆದರೆ ಸಾಕು ಎನ್ನುವ ರೀತಿಯಲ್ಲಿ ಯೋಚಿಸಿದರೆ ಆ ಮಗಳು ಇನ್ನಾರಿಗೆ ತಾನೇ ಹತ್ತಿರ ವಾಗಲು ಸಾಧ್ಯ. ಯಾವುದೇ ಯುಗದಲ್ಲಿ , ಯಾವುದೇ ಕ್ಷೇತ್ರದಲ್ಲಿ ಎಂತಹ ಉತ್ತಮ ಸ್ಥಾನದಲ್ಲಿದ್ದರೂ  ಅವಳಿಗೆ ತಾನೊಂದು ಮನೆಗೆ ಭಾರ ಎನ್ನುವ ಭಾವನೆ ಖಂಡಿತ ಮೂಡುತ್ತದೆ.

ಏಕೆ ಮದುವೆಯೇ ಮಗಳಿಗೆ ಮೂಲ ಗುರಿಯಾಗಬೇಕೆ? ಮದುವೆ ಆಗಿಲ್ಲವೆಂದರೆ ಚಿಂತೆಯನ್ನು ಬದಿಗಿಟ್ಟು ಮಗಳು ಕೆಲಸದಲ್ಲಾದರು ಸಂತೋಷವನ್ನು ಕಾಣಲಿ, ಆತ್ಮ ವಿಶ್ವಾಸವನ್ನು ಬೆಳೆಸಿ ಕೊಳ್ಳಲಿ ಎಂದು ಹುರಿದುಂಬಿಸುವ ಬದಲು ಮದುವೆ ಆಗುವ ತನಕ ಮನೆಯಲ್ಲಿ ಕೂತು ಏನು ಮಾಡುವುದು ಅಂತ  ಕೆಲಸಕ್ಕೆ ಕಳಿಸ್ತಾ ಇದ್ದೇವೆ ಎನ್ನುವ ಭಾವನೆಯನ್ನೇ   ಹೊಂದಿರಬೇಕೆ?. ಎಂತಹುದಕ್ಕೂ ತಲೆ ಕೆಡಿಸಿ ಕೊಳ್ಳದವರು ಕೂಡ ಈ ಮದುವೆ ಎನ್ನುವ ವಿಷಯ ಬಂದೊಡನೆಯೇ ಮನೆಯವರೆಲ್ಲಾ ಸೇರಿಕೊಂಡು ಆ ಹುಡುಗಿಯ ಮನಸನ್ನು ನೂರು ಹೋಳು ಮಾಡುತ್ತಾರೆ. 

ಹುಟ್ಟಿನಿಂದ ಅಷ್ಟೊಂದು ಪ್ರೀತಿ ತೋರಿಸುವ ಮನೆಯವರು , ದೊಡ್ದವರಾದೊಡನೆ ಅದೇ ಪ್ರೀತಿಯಿಂದ ಬೇರೆ ಕಳಿಸುವ ಬದಲು ದಬ್ಬುವುದಾದರೂ ಏತಕ್ಕೆ? ಜನರಿಗೆ ಹೆದರಿಯೇ? ಹಾಗಾದರೆ ಮಗಳ ಮನಸಿಗೆ ಆಗುವ ಪರಿಣಾಮಕ್ಕಿಂತ ಸುಖದಲ್ಲಿ ಬಂದು ಕಷ್ಟದಲ್ಲಿ ಹಿಂದಾಡುವ ಜನರೇ ಹೆಚ್ಚೇ ? ಇದಕ್ಕೆನು ಉತ್ತರ.. ಕೇವಲ ದೀರ್ಘ ಮೌನ ಅಲ್ಲವೇ  !!! ಪಟ್ಟಣದಲ್ಲಿ ಪರಿಸ್ಥಿತಿ ಬದಲಾಗುತ್ತಿರಬಹುದು ಆದರೆ ಇನ್ನೂ ಹಲವರ ಮನಸ್ಥಿತಿ ಇನ್ನೂ ಹಾಗೆಯೇ ಉಳಿದು ಹೋಗಿದೆ. 

ಅದು ಹೋಗುವ ತನಕ ಅಂತಹ ಸ್ಥಿತಿಯ ಹುಡುಗಿಯರು ಎಂದೆಂದೂ ಹೇಳುತಲೇ ಇರುವರು " ಅಪ್ಪಾ/ಅಮ್ಮಾ ನನ್ನ ಅಸ್ತಿತ್ವವ ಉಳಿಸಿ ಕಳಿಸಿಕೊಡಿ , ಹೆತ್ತ ತಪ್ಪಿಗೆ ಮಾತ್ರ ಹೊರತಳ್ಳದಿರಿ ".

 ಇನ್ನೊಂದು ವಿಷಯ ಈ ಕಥೆ, ಈ ಸಮಸ್ಯೆ ಮದುವೆಯಾದೊಡನೆ ಇಲ್ಲಿಗೆ ನಿಲ್ಲುವುದೇ ? 
ಅಥವಾ ಮುಂದುವರಿಯುವುದೇ ? ಯೋಚಿಸಿ ಉತ್ತರ ಹೇಳಿ. ನಿಮ್ಮ ಉತ್ತರಕ್ಕಾಗಿ ನಾ ಕಾಯುತಲಿರುವೆ.  











Friday, June 17, 2011

5 Easy Steps to make Envelope

Step 1

Step2

Step3

Step4

Step5   




Wednesday, June 8, 2011

ಹಾಲಿನಂತ ಮನಸು

ಒಮ್ಮೆ ಒಡೆದು ಹೋದರೆ ಈ ಮನಸು ಹಾಲಿನಂತೆ,
ಕೂಡದು ಅದು ಎಂದಿಗೂ ಸೀಳಿದ ಕನ್ನಡಿಯಂತೆ ;
    ಹಾಲು- ಕನ್ನಡಿಯಾದರೋ ತರಬಹುದು ಇನ್ನೊಂದು,
               ಒಡೆದು ಹೋದ ಮನಸುಗಳು ಆಗಲಾರವು ಹತ್ತಿರ ಮತ್ತೆಂದು.